Tuesday, February 9, 2016

ಅಪಾರ ಕೀರ್ತಿ ಗಳಿಸಿ... ಕನ್ನಡದಲ್ಲಿ



ಹಿರಿಯ ಹೆಸರು ಗಳಿಸಿ ಮೆರೆದ ನಾಡು ನಮ್ಮದು
ಕರುನಾಡು ನಮದು ಹಾಡು ಕುಣಿತಗಳಿಗೆ ಬೀಡಿದು II ಬಲುದೊಡ್ಡ ಹೆಸರಿನಾII

ಕಡಿದು ಸುತ್ತಮುತ್ತಲಿದ್ದ ಕಗ್ಗಾಡನ್ನಾ..
ಕಟ್ಟಿದರು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಹಿರಿಮೆಯನ್ನು ತಾಳಿ
ದಿಕ್ಕು ದಿಕ್ಕುಗಳಲಿ ಶಾಂತಿ ಕಹಳೆಯ ಕೇಳಿ II ಬಲುದೊಡ್ಡ ಹೆಸರಿನಾII

ತಾಯಿ ತುಂಗಭದ್ರೆ ಹರಿಯುತಿಹಳು ಇಲ್ಲಿ
ನಮ್ಮೆಲ್ಲರ ಪಾಪಗಳಾ ತೊಳೆವಳಾಕೆ ಇಲ್ಲಿ II ಬಲುದೊಡ್ಡ ಹೆಸರಿನಾII

ವಿರೂಪಾಕ್ಷಾ ದೇವಾ ಇವನು ನಮ್ಮ ಕಾಯ್ವಾ
ಬಾಳಿಗೆ ತಾ ತೋರುವನು ಬಾಳುವ ಬೆಳಕಾ II ಬಲುದೊಡ್ಡ ಹೆಸರಿನಾII

No comments:

Post a Comment