Tuesday, May 2, 2017

ಹೊಸಕಲ್ಲು ಕಾಲ: ಸಂಗನಕಲ್ಲು


(ರಾಷ್ಟ್ರೀಯ ಹೆದ್ದಾರಿಗಾಗಿ ಬಲಿಯಾಗಲಿರುವ ಐತಿಹಾಸಿಕ ಬೂದಿ ಕಣಿವೆ ಹೊಸಕಲ್ಲು ಕಾಲದ ಪುರಾವೆಗಳು - ಸುದ್ದಿ)
ಸಂಗನಕಲ್ಲು, ತೋರಣಗಲ್ಲು, ಬೂದಿಕಣಿವೆ
ಬಹುಶಃ ನಿಮಗವು ಕಲ್ಲು ಬೂದಿ ಕಣಿವೆ
ಆದರೆ ನಮಗೆ ಅಸ್ತಿತ್ವದ, ಮೊದಲ ಗುರುತು!
ನಮ್ಮ ಹಿರಿಯರಿದ್ದ ನೆಲೆಗಳು 
ಬಹುಶಃ ನಿಮಗೆ ತರಿದುಬಿಡಬಹುದಾದ ಪಾಳು ನೆಲ,
ನಮಗವು ಅಮರಾವತಿಯಂತೆ ಸ್ವರ್ಗದೂರು...
ನಮ್ಮ ಹಿರಿಯರ ಸಮಾಧಿಗಳು
ಬಹುಶಃ ನಿಮಗೆ ಸರಿಸಿಬಿಡಬಹುದಾದ ಗೋರಿಗಳು
ಆದರವು ನಮಗೆ ಗುಡಿ ಗುಡಾರಗಳು..
ಹೊಸ ಕಲ್ಲುಕಾಲದ ಕುರುಹುಗಳು
ಬಹುಶಃ ನಿಮಗವು ಪ್ರಗತಿ ಪಥದ ಅಡ್ಡಗಾಲುಗಳು
ಆದರೆ ನಮಗೆ ಬತ್ತದ ಸ್ಪೂರ್ತಿಯ ಪಾದಧೂಳಿಯ ಹಾರೈಕೆ..

Sunday, April 16, 2017

ಮೌನದಾಭರಣ!



ಮೌನಂ ಸಮ್ಮತಿ ಲಕ್ಷಣಂ...
ಊಹೂಂ... ಸುಳ್ಳು..
ಹೆಚ್ಚಿನ ಸಲ ಮೌನ ಅಸಮ್ಮತಿಯ ಲಕ್ಷಣ..

ಹೂಂ ಗುಟ್ಟುವುದು ಸದಾ ಒಪ್ಪಿಗೆಯೇ ಅಲ್ಲಾ...
ಹೆಚ್ಚಿನ ಸಲ... ಅದು ಅಸಹಾಯಕತೆಯ ನರಳಾಟ

ಮೌನವನ್ನೆಲ್ಲಾ ಸಮ್ಮತಿಯೆಂದೆಣಿಸಿ...
ಹೂಂಗುಟ್ಟಿದ್ದನ್ನೆಲ್ಲಾ ಒಪ್ಪಿಗೆಯೆಂದೆಣಿಸಿ...
ನಡೆದುಕೊಂಡದ್ದೆಲ್ಲ‌ಾ  ಅತ್ಯಾಚಾರ, ಬಲಾತ್ಕಾರ

ದೇವರು, ನಿಜ ಮನಸ್ಸು ಓದುವ ಶಕ್ತಿ ಕೊಟ್ಟಿದ್ದರೆ ಹೀಗಾಗುತ್ತಲೇ ಇರಲಿಲ್ಲ...
”ತಪ್ಪು”... ಮೌನಕ್ಕೆ ನನ್ನದೇ ಅರ್ಥ ಕೊಟ್ಟ ನನ್ನದಾ?
ಮೌನವನ್ನೇ ಮುಂದು ಮಾಡಿ ಮನಸ್ಸನ್ನು ಮುಚ್ಚಿಡುವ ನಿನ್ನದಾ?

ನಿನ್ನ ಮೌನದಾಭರಣ.. ನನ್ನೆದೆಯ ಇರಿದ ಶೂಲ!

ಅದು ಪ್ರತಿಕ್ಷಣಕೂ ತುಂಬುತಿದೆ
ನಿನ್ನೆಗಳ ಮತ್ತೆ ತರಲಾರದ ಅಸಹಾಯಕತೆ...
ನಿರಾಸೆ, ಹತಾಶೆ, ಅಸಹನೆ ಮನದ ತುಂಬ‌...