ಒಡಲ ಹಾಡು
Monday, April 18, 2011
ನನ್ನ ಪಾಪು...ಗೆ!
ಪಾಪು
ನಿನ್ನ ನಗೆ
ಮುಗ್ಧ... ಸುಂದರ
ಮಲ್ಲೆ ಬಿರಿದಂತೆ
ಬೆಳಕು ಹರಿದಂತೆ
ಮೋಡ ಸರಿದಂತೆ
ಮುತ್ತು ಸುರಿದಂತೆ
ಪಾಪು
ನಿನ್ನ ನಗೆ
ಸ್ನಿಗ್ಧ ಮಂದಾರ
ಕಡಲ ತೆರೆಯಂತೆ
ಹಸಿರ ಧರೆಯಂತೆ
ಪ್ರೇಮ ತೊರೆಯಂತೆ
ಹಾಲ ನೊರೆಯಂತೆ
(ಆನಂದ್ - 1997)
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment